Praveen Kumar in Ananya Priya Lavanya Poems

Praveen Kumar in Ananya Priya Lavanya Poems

1ಅಂದು-ಇಂದು
2ಅಂದು..... ಇಂದು.....
3ಅಕ್ಟೋಬರ್ 17
4ಅಗೋಚರೆ
5ಅಡಕತ್ತರಿ ಮಧ್ಯೆ
6ಅತ್ತ ಅವಳು, ಇತ್ತ ಇವನು
7ಅತ್ಯಗತ್ಯ ಸತ್ಯ
8ಅನನ್ಯ ಭಾವ
9ಅನುರಾಗ
10ಅಮೂರ್ತ ಸಂಬಂಧ
11ಅರಿವಿನ ಪರಿಧಿ
12ಅವಳು
13ಅವಳೇನೆಂದು ಅವಳನ್ನು ತಿಳಿದವನೆ ಬಲ್ಲ
14ಅವ್ಯಕ್ತ ಸೆಳೆತ
15ಅಸಹಾಯಕತೆ
16ಅಸ್ಥಿತ್ವ
17ಆ ದಿನ
18ಆತ್ಮ ತೃಪ್ತಿ
19ಆಸೆ
20ಇಲ್ಲಿ ಎಲ್ಲವೂ ಒಂದೆ
21ಈ ಕಣ್ಣು ಮುಚ್ಚಾಲೆ ಏಕೆ?
22ಈ ಪ್ರೀತಿ
23ಉಗಮ
24ಋತು ರಾಣಿ
25ಏಕೀ ರೀತಿ ಛೇಡಿಸುವೆ ನನ್ನ?
26ಒಂದೆ ಆತ್ಮದ ಅಲೆಗಳು
27ಓಡಿ ಬಾ
28ಓಡುವುದು ಸರಿಯೆ?
29ಕಣ್ಣ ಬೆಳಕಿನ ಸುಳಿಯಲ್ಲಿ ಸೆರೆಯಾಗಿ ನಿಲ್ಲು
30ಕನಸು
31ಕರೆಯದೆಲೆ ಬಂದವಳು ನೀನು
32ಕಾಡ್ಗಿಚ್ಚು
33ಕಾದು ಕುಳಿತೆ
34ಕಾಲಚಕ್ರ
35ಕಾಲಾಯ ತಸ್ಮೈ ನಮಃ
36ಕಾವ್ಯ ವಿಪರ್ಯಾಸ
37ಗಂಗೋತ್ರಿ
38ಗುರಿ ತಲಪುವ ತನಕ
39ಗುಲಾಬಿವನಕೆ ಬಂದ ಅತಿಥಿಯೆ
40ಗೆಜ್ಜೆಯ ಹೆಜ್ಜೆ
41ಘೋರ ತಪಸ್ಸು
42ಚಿನ್ನದ ಪಂಜರ
43ಜಗನ್ನಿಯಮ
44ಜನ್ಮ ಜನ್ಮದ ವಿರಹ
45ಜೀವ-ಜೀವನ
46ತಪಸ್ವಿನಿ
47ತೃಪ್ತಿ
48ತೃಪ್ತಿ ಜೇನು
49ತ್ರಿಶಂಕು ನಾನು
50ದಟ್ಟ ಪ್ರೀತಿ ಕಡಿವಾಣದಲ್ಲಿ

Best Poem of Praveen Kumar in Ananya Priya Lavanya

ಉಗಮ
ನೀನೆಷ್ಟು ದೂರ ಹೋದರೇನು,
ಹಾರಿ ನೀನು ಬರಲೆ ಬೇಕು,
ನಿನ್ನೊಲವು ಎಷ್ಟು ಬತ್ತಿದರು,
ಮತ್ತೊಲವಿನೊರತೆ ಒಸರಬೇಕು.

ಜೇನು ತರಲು ಹೋದ ದುಂಬಿ
ತನ್ನ ಗೂಡು ಮರೆವುದುಂಟೆ?
ಕುಸುಮ ಚೆಲ್ಲಿದಂತ ಗಂಧ
ತನ್ನ ಮೂಲ ಮರೆವುದುಂಟೆ?

ಬೇರು ನೆಲದ ಅಡಿಯಲಿದ್ದೂ
ಆಕಾಶದತ್ತ ಬೆಳೆವ ಮರದ
ಜೀವದಾಸರೆ ಹೇಗೋ ಹಾಗೆ
ನನ್ನ ನಿನ್ನ ಬಿಡದ ನಂಟು.

ಬಿಸಿಲನೇರಿ ಗಾಳಿ ಮೇಲೆ
ದೂರ ದೂರ ಹೊರಟ ನೀನು
ಮುಸ್ಸಂಜೆ ಮೂಡಿದಾಗ ಮೆಲ್ಲ
ಬೆಳದಿಂಗಳೇರಿ ನಗುತ ಬರುವೆ.

ಹಗಲಲ್ಲಿ ಹೊರಗೆ ಹೊರಟ ನೀನು
ಕತ್ತಲಲ್ಲಿ ಪಿಸು ಮಾತಿನಿಂದ
ಬೆನ್ನಲ್ಲೆ ನೀನು ಇರುವೆನೆಂಬ
ಅದೃಶ್ಯ ಸತ್ಯ ತಿಳಿಸಿ ಕೊಡುವೆ.

ನೀನೆಲ್ಲೆ ಇರು, ನಿನ್ನ ಬೆಳಕು
ಅಂತರಿಕ್ಷದಾಳ ದಾಟಿ
ಉಗಮದತ್ತ ತೂರುತಿಹುದು,
ಆಂತರ್ಯ ಬಗೆದು ತೋರುತಿಹುದು.

ಇದು ಬ್ರಹ್ಮ ಗಂಟು, ಜೀವ ದಂಟು,
ಅನಂತಕಾಲ-ನೆಲದ ಅಂಟು,
ತಿಳಿಯದಂತ . . .
Read the full of ಉಗಮ
ಗಂಗೋತ್ರಿ
ನೀನು ನನ್ನವಳೆಂದು, ನಾನು ನಿನ್ನವನೆಂದು
ನಿನ್ನ ನನ್ನ ಹೃದಯ ಆತ್ಮಗಳು ಸಾರುತ್ತಿರುವಾಗ
ಅವರಿವರ ಹೊರ ಜಗತ್ತಿನ ಹಂಗೇಕೆ ನಮಗೆ?
ನೀನು ನನ್ನಲ್ಲಿ, ನಾನು ನಿನ್ನಲ್ಲಿ ಹುದುಗಿರುವಾಗ
ನಮ್ಮ ನಮ್ಮಲ್ಲೆ ಜೀವನದ ಧ್ಯೇಯ ಕಂಡಿರುವಾಗ,
ವಿಧಿ ವಿಧಾನ ನ್ಯಾಯಾನ್ಯಾಯದ ಗೊಡವೆ ಬೇಕೆ?

ಪ್ರಕೃತಿಯ ನಿಬಂಧನಾನುಸಾರ ಒಂದಾದವರು ನಾವು,
ಪ್ರಕೃತಿಯ ದಿವ್ಯ ಹಸ್ತ ಹೊಸೆದು ಹೆಣೆದಂತೆ ಬೆಸೆದವರು,
ಕೃತಕ ಸ್ವಾರ್ಥ ಯುಕ್ತಿನಿಯುಕ್ತಿ ದೋಷಪೀಡನೆ ಇಲ್ಲಿಲ್ಲ;
ನಾವು ನಾವೇ ಲಕ್ಷ್ಯಗಳು, ನಮ್ಮ ಮೀರಿದ ಧ್ಯೇಯ ನಮಗಿಲ್ಲ,
ಬೇರೊಂದು ಸಾಧನೆಯ ಸಾಧಕ ವಾಹಕಗಳಲ್ಲ ನಾವು,
ನಮ್ಮ ನಮ್ಮಲ್ಲೆ ಜೀವನದ ಸಂತೃಪ್ತಿ ಸಾರ್ಥಕ್ಯ ಕಾಣುವವರು.

ಅಸ್ಥಿರತೆಯ ರೈಲುಕಂಬಿಯ ಗುಂಟ ಓಡುವ ಲೋಕಕ್ಕೆ
ನಿನ್ನ ನನ್ನ ನಮ್ಮ ಸ್ಥಿರತೆ ಬಿಡಿಸಲಾಗದ ಗಂಟು, ಗುಟ್ಟು,
ಕಾಲಾಧಿಪತ್ಯ ಮೀರಿ ಹರಿಯುವ ಹಿರಿಯ ವಿಸ್ಮಯ ಪ್ರಪಾತ;
ಪ್ರಪಂಚ ಹೇಗೇ ಇರಲಿ, ನಮ್ಮನಮ್ಮಲ್ಲೆ ಹುದುಗಿರುವ ನಮಗೆ,
ಜೊತೆಜೊತೆಗೆ ಕಾಲದ ಕೊನೆಗೆ ಬಿಡದೆ ನಡೆಯುವ ನಮಗೆ,
ನಿನಗೆ, ನನಗೆ, ನಾವೇ ಅರ್ಥ . . .
Read the full of ಗಂಗೋತ್ರಿ